ನಡೆಯುತಿರೆ ನೀನು
ನಡುವ ಬಳುಕುತಲಿ
ನಾಟ್ಯವ ನಿಲ್ಲಿಸಿತು
ನವಿಲು ನಾಚುತಲಿ
ಬರುತಿರೆ ನೀನು
ನಗೆಯ ಚೆಲ್ಲುತಲಿ
ಅರಳಿದ ಹೂವು
ಬಾಡಿತು ಕಿಚ್ಚಿನಲ್ಲಿ
ಮೋಡದ ಮರೆಯಲಿ
ಅವಿತನು ಚಂದಿರ
ನೋಡುತಾ ನಿನ್ನ
ಮೊಗವಿದು ಸುಂದರ
ಕೆಂಪಾದವು ಮಂಕಾದವು
ಬಾನಲ್ಲಿರುವ ತಾರೆ
ಪಳ ಪಳ ಹೊಳೆಯುವ
ಈ ಕಂಗಳ ನೋಡುತಿರೆ
ಆ ನವಿಲು ಈ ಹೂವು
ಆ ತಾರೆ ಈ ಚಾಂದಿನಿ
ಸರಿ ಸಾಟಿಯಾಗಲಾರೆವು
ನಿನಗೆ ಓ ಹಂಸಿನಿ !
-GSM
22/9/2009
© copywright 2010-2019